Back

ಸಂತ ಮೈಕಲರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮಡಿಕೇರಿ.

ಮೈಸೂರು ಡಯಾಸಿಸನ್ ಎಜುಕೇಷನಲ್ ಸೊಸೈಟಿ (ರಿ)

ಸಂತ ಮೈಕಲರ ಶಾಲೆ ನಡೆದು ಬಂದ ದಾರಿ :

ಕೊಡಗು ಮೈನವಿರೇಳುಸುವ ಹೆಸರು, ಭಾರತ ಸ್ವಾತಂತ್ಯಗಳಿಸುವ ಮುನ್ನ ಕೊಡಗು ದೊರೆಗಳ ಮಮತೆಯ ಮಡಿಲಲ್ಲಿ ಬೆಳೆಯುತ್ತ ಬಂತು. ಬ್ರಿಟೀಷ್ ಆಡಳಿತದ ಮದರಾಸು ಪ್ರಾಂತ್ಯಕ್ಕೆ ಕೊಡಗು ಸೇರಿದ ಮೇಲೆ ರಾಜಕೀಯ ಪ್ರಭಾವಿಗಳಿಗೆ ಸಿಲುಕಿದರೂ ತನ್ನ ವೈಶಿಷ್ಟö್ಯತೆಯನ್ನೇ ಉಳಿಸಿಕೊಂಡು ಬಂದ ಕೊಡಗಿನಲ್ಲಿ ಮಡಿಕೇರಿಯ ಹೆಸರನ್ನು ಕೇಳದ ಕನ್ನಡಿಗರಾರಿದ್ದಾರೇ. ! ಇಲ್ಲ ರಾಜಸೀಟನ್ನು ನೋಡುವ ಮುನ್ನ ರಸ್ತೆ ಎಡ ಬದಿಗೆ ಕಣ್ಣು ಹಾಯಿಸಿದರೆ ಸಿಗುವ ನೋಟವಾದರೂ ಏನು? ಗಾಂಧಿ ಮಂಟಪ ಅದರ ಹಿಂದೆಯೇ ಎತ್ತರದ ದಿಬ್ಬದ ಮೇಲೆ ಕಂಗೊಳಿಸುವ ಕಟ್ಟಡ ! ಅದೇ ಸಂತ ಮೈಕಲರ ಶಾಲೆ.
ಈ ಶಾಲೆಯ ಹೆಸರು ಕೇಳಿದೊಡನೆ ಅದೆಷ್ಟೊ ಹಳೆಯ ವಿದ್ಯಾರ್ಥಿಗಳು ಪುಳಕಿತಗೊಳ್ಳುತ್ತಾರೆ. ಈ ಶಾಲೆಗೆ ಸುಮಾರು ೧೪೩ ವರ್ಷಗಳ ಇತಿಹಾಸವಿದೆ.

ಇತಿಹಾಸಗಳಲ್ಲದ ಕಾಲವನ್ನು ಇತಿಹಾಸ ಪೂರ್ವ ಕಾಲ ಎನ್ನುವರು. ಹಾಗೇಯೇ ಈ ಶಾಲೆಯ ಇತಿಹಾಸದಲ್ಲಿಯೂ ಕೂಡ ದಾಖಲೆಗಳಿಲ್ಲದ ಕಾಲವೂ ಇದೆ. ಅದನ್ನೇ ಸಂತ ಮೈಕಲರ ಶಾಲಾ ಇತಿಹಾಸ ಪೂರ್ವ ಕಾಲವೆನ್ನಬೇಕಿದೆ. ೧೮೫೭ರ ಕಾಲ ಅದಕ್ಕೂ ಮುಂಚೆ ಸಂತ ಮೈಕಲರ ಶಾಲೆ ತಮಿಳು ಪ್ರಾಥಮಿಕ ಶಾಲೆಯಾಗಿತ್ತು. ಮೊದಲನೇ ಜಾಗತಿಕ ಯುದ್ದ ಪ್ರಾರಂಭವಾಗುವವರೆಗೆ ಶಾಲೆಯ ಇತಿಹಾಸದ ತುಣುಕುಗಳು ಸಹ ಕತ್ತಲ ಗರ್ಭ ಸೇರಿಬಿಟ್ಟಿದೆ.

೧೯೮೯ರ ಅವಧಿ ರೇ|| ಫಾ|| ಗ್ರೆಗೋರಿಯಸ್‌ರವರ ಆಗಮನವಾಯಿತು. ಇವರ ಆಗಮನದೊಂದಿಗೆ ಕಟ್ಟಡಗಳ ಆಗಮನವೇ ಆದಂತಾಯಿತು. ಸಂತ ಮೈಕಲರ ಶಾಲೆಯ ಇತಿಹಾಸದಲ್ಲಿ ಮಹತ್ವದ ಸಾರ್ವಜನಿಕ ಒತ್ತಾಯದ ಮೇರೆಗೆ ಪೂರ್ವ ಪ್ರಾಥಮಿಕ ವಿಭಾಗದಿಂದ ಹಿಡಿದು, ಹಿರಿಯ ಮಾಧ್ಯಮಿಕದವರೆಗೆ ಪ್ರತ್ಯೇಕ ಆಂಗ್ಲ ಮಾಧ್ಯಮ ವಿಭಾಗವನ್ನು ೧೯೯೨ರಲ್ಲಿ ಪ್ರಾರಂಭ ಮಾಡಲಾಯಿತು. ಆದ್ದರಿಂದಲೇ ಇಂದು ಭವ್ಯವಾದ ಕನ್ನಡ ಹಿರಿಯ ಮಾಧ್ಯಮ ಮತ್ತು ‘ಎಲ್’ ಆಕಾರದ ಆಂಗ್ಲ ಮಾಧ್ಯಮ ಕಟ್ಟಡ ಮತ್ತು ಚರ್ಚಿನ ಆವರಣದೊಳಗಿರುವ ಪೂರ್ವ ಪ್ರಾಥಮಿಕ ವಿಭಾಗದ ಕಟ್ಟಡಗಳು ತಲೆ ಕಂಗೋಳಿಸುತ್ತಿದೆ

ಮುಖ್ಯಾ ಶಿಕ್ಷಕರ ಸಂದೇಶ

ಭಗಿನಿ ಮೇರಿ ಸಿಸಿಲಿಯಾ,    

ಮುಖ್ಯ ಶಿಕ್ಷಕರು,

ಸಂತ ಮೈಕಲರ ಕನ್ನಡ ಮಾಧ್ಯಮ 
 ಹಿರಿಯ ಪ್ರಾಥಮಿಕ ಶಾಲೆ ಮಡಿಕೇರಿ. 

ವಿದ್ಯೆ ಎಂಬುವುದು ದೇವರ ದೇವಾಲಯ ದೇಗುಲದಂತೆ. ಆ ದೇಗುಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪರಿಪೂರ್ಣತೆಯನ್ನು ಪಡೆಯುವಲ್ಲಿ ಸಂತ ಮೈಕಲರ ವಿದ್ಯಾಸಂಸ್ಥೆ ಅವರಿಗೆ ಅನುವು ಮಾಡಿಕೊಟ್ಟಿದೆ. ಇದು ಒಂದು ಪ್ರಶಂಸೆಯ ವಿಚಾರವಾಗಿದೆ. ಪ್ರತಿಯೊಂದು ಚಟುವಟಿಕೆಗಳಲ್ಲಿ ಸಾಧನೆಯನ್ನು ಮಾಡುತ್ತಾ ಶಿಸ್ತು ಬದ್ಧತೆಗೆ ಒಳಗಾಗಿ ಶಾಲೆಯ ಯಶಸ್ಸು ಹೆಜ್ಜೆ ಹೆಜ್ಜೆಗೂ ಪ್ರಗತಿಯನ್ನು ಪಡೆಯುತ್ತದೆ. 

ನಂಬಿಕೆ, ನೀರಿಕ್ಷೆ, ಪ್ರೀತಿ – ಸಹನೆ ಎಂಬ ಹಡಗಿನ ದಾರಿಯಲ್ಲಿ ಸಾಗುತ್ತಾ ಎಲ್ಲರೂ ಈ ಹಡಗಿನಲ್ಲಿ ಪಯಣಿಸಿ ಮಕ್ಕಳ ಭವಿಷ್ಯವನ್ನು ಕಟ್ಟುವಲ್ಲಿ ಹಾಗೂ ಸಂಸ್ಥೆಯ ಏಳಿಗೆಗಾಗಿ ದುಡಿಯುವಲ್ಲಿ ನೀವು ನಾವು ಕಾರಣಕರ್ತರಾಗಿ ಕರ್ತವ್ಯವನ್ನು ನಿಷ್ಠೆ – ಬದ್ಧತೆಯಿಂದ ನೆರೆವೇರಿಸುವಲ್ಲಿ ಶ್ರಮಿಸೋಣ……

ಶೈಕ್ಷಣಿಕ ಮಹತ್ವ :

ಸಂತ ಮೈಕಲರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೧೪ ರಿಂದ ಪ್ರಸ್ತುತ ೨೦೨೪-೨೫ನೇ ಸಾಲಿನವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿದ ಹೆಗ್ಗಳಿಕೆ ಹಾಗೂ ಹೆಮ್ಮೆ ನಮ್ಮ ಶಾಲೆಯದಾಗಿದೆ. ಇಲ್ಲಿ ವಿದ್ಯಾಭ್ಯಾಸವನ್ನು ಪಡೆದಂತಹ ಹಲವಾರು ವಿದ್ಯಾರ್ಥಿಗಳು ರಾಜ್ಯ ಮಟ್ಟ ಹಾಗೂ ರಾಷ್ಟçಮಟ್ಟದಲ್ಲ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿರುವರು ಹಾಗೂ ಅಂತರಾಷ್ಟಯ ಮಟ್ಟದಲ್ಲ ಸಹ ಶ್ರೇಷ್ಠ ಮಟ್ಟದಲ್ಲ ತಮ್ಮ ಮೇಲುಗೈಯನ್ನು ಸಾಧಿಸಿರುತ್ತಾರೆ. ಇದಕ್ಕೆ ಅವರ ಶ್ರಮ ಮತ್ತು ನಮ್ಮ ಶಿಕ್ಷಕರ ಕಾರ್ಯಕ್ಷಮತೆ, ದಕ್ಷತೆ, ಜ್ಞಾನದ ಬಂಡಾರ, ವಿದ್ಯಾರ್ಥಿಗಳನ್ನು ಹುರಿದುಂಬಿಸುವುದರಲ್ಲ ಅವರ ಕಾರ್ಯಪ್ರವೃತ್ತ ಇವೆಲ್ಲಾವು ಸಹ ಶಾಲೆ ಮತ್ತು ಆಡಳಿತ ಮಂಡಳಿಯವರ ಸಹಕಾರದೊಂದಿಗೆ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಇಲ್ಲಿ ಗೋಚರವಾಗುತ್ತದೆ. ಅಲ್ಲದೆ, ಪ್ರಸ್ತುತ ನುರಿತ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಚಟುವಟಿಕೆಯಾಧಾರಿತ ಬೋಧನೆಗೆ ಹೆಚ್ಚು ಒತ್ತು ನೀಡಬೇಕಾಗಿರುವುದರಿಂದ ಪೂರ್ವ ಪ್ರಾಥಮಿಕದಿಂದ ಪ್ರಾರಂಭಗೊAಡು ಹಿರಿಯ ಪ್ರಾಥಮಿಕದವರೆಗೆ ಗಣಕಯಂತ್ರ (ಕಂಪ್ಯೂಟರ್) ಭರತನಾಟ್ಯ, ವೆಸ್ಟರ್ನ್ ಡ್ಯಾನ್ಸ್, ಕರಾಟೆ, ಸಂಗೀತ ಮತ್ತು ಚಿತ್ರಕಲೆ ಇವುಗಳನ್ನೊಳಗೊಂಡAತೆ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದವರೆಗೆ ನಮ್ಮ ವಿದ್ಯಾರ್ಥಿಗಳು ಶಾಲೆಯನ್ನು ಪ್ರತಿನಿಧಿಸಿ ಥ್ರೋಬಾಲ್, ವಾಲಿಬಾಲ್, ಷಟಲ್ ಬ್ಯಾಡ್ಮೆಂಟನ್ ಮತ್ತು ಚೆಸ್ ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಾರೆ.

ಶೈಕ್ಷಣಿಕ ಕ್ರೀಯಾ ಚಟುವಟಿಕೆಗಳು:

ಸಂತ ಮೈಕಲರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯೂ ಸರ್ಕಾರದ ಅನುದಾನಿತಕ್ಕೆ ಒಳಪಟ್ಟಿರುವದರಿಂದ ಕರ್ನಾಟಕ ರಾಜ್ಯದ ಪಠ್ಯ ಪುಸ್ತಕವನ್ನು ಅನುಸರಿಸಲಾಗುವುದು. ಮಕ್ಕಳಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸುವಲ್ಲಿ ಹಲವಾರು ಚಟುವಟಿಕೆ ಆಧಾರಿತ ಬೋಧನೆಯನ್ನು ಮಾಡಲಾಗುವುದು. ನುರಿತ ಶಿಕ್ಷಕರಿಂದ ಬೋಧನೆಯನ್ನು ಮಾಡಲಾಗುವುದು.

 

 

 

ಸೌಲಭ್ಯ ಮತ್ತು ಸಂಪನ್ಮೂಲಗಳು :

ಉತ್ತಮ ಕೊಠಡಿ ವ್ಯವಸ್ಥೆ.
ಉಚಿತ ಪಠ್ಯ ಪುಸ್ತಕ.
ಪೌಷ್ಠಿಕಾಂಶಯುಕ್ತ ಮದ್ಯಾಹ್ನದ ಬಿಸಿಯೂಟ, ಕೆನೆಭರಿತ ಹಾಲು ಮತ್ತು ಮೊಟ್ಟೆ ವಿತರಣೆ.
ವ್ಯವಸ್ಥಿತವಾದ ಕ್ರೀಡಾ ಸಾಮಾಗ್ರಿಗಳು.
ಕಂಪ್ಯೂಟರ್ ತರಗತಿಗಳು.
ಗ್ರಂಥಾಲಯ ವ್ಯವಸ್ಥೆ.
ಬಸ್ ವ್ಯವಸ್ಥೆ.

ಸಹಪಠ್ಯ ಚಟುವಟಿಕೆಗಳು :

ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿರುವ ಮಕ್ಕಳ ಅಭಿರುಚಿಗೆ ತಕ್ಕಂತೆ ಮತ್ತು ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಶಾಲಾ ಹಂತದಲ್ಲಿ ಸಹಪಠ್ಯ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
ಭರತನಾಟ್ಯ
ವೆಸ್ಟರ್ನ್ ಡ್ಯಾನ್ಸ್
ಕರಾಟೆ
ಸಂಗೀತ
ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ತಯಾರಿಕೆ

ವಾಲಿಬಾಲ್ ತಾಲ್ಲೂಕು ಮಟ್ಟ

ಚೆಸ್ ಜಿಲ್ಲಾ ಮಟ್ಟ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್

ಭಾರತ್ ಸೇವಾದಲ

ಕಂಪ್ಯೂಟರ್ ಕೊಠಡಿ

ಪ್ರತಿಭಾ ದಿನ

ಪ್ರಾರ್ಥನ ನೃತ್ಯ

ಛದ್ಮವೇಷ

ಬಿಸಿಯೂಟ ಸವಿಯುತ್ತಿರುವುದು

ನಮ್ಮ ಸಂಸ್ಥೆ ನಿಮ್ಮ ಆಯ್ಕೆ ?

ಸಂತ ಮೈಕಲರ ವಿದ್ಯಾಸಂಸ್ಥೆಯು ಮಕ್ಕಳ ವಿದ್ಯಾರ್ಜನೆಗೆ ಮತ್ತು ಕಲಿಕೆ ಆಧಾರಿತ ಚಟುವಟಿಕೆ ಬೋಧನೆಗೆ ಉತ್ತೇಜಿಸುವಲ್ಲಿ ತನ್ನ ಪಾತ್ರವನ್ನು ಸುಸೂತ್ರವಾಗಿ ನಿರ್ವಹಿಸುತ್ತಿದ್ದು, ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಮಂಜಿನ ನಗರಿ ಮಡಿಕೇರಿಯಲ್ಲಿ ತನ್ನದೇ ಆದಂತಹ ಗರಿಮೆಯನ್ನು ಹೊಂದಿರುತ್ತದೆ. ಶಾಲೆಯು ಶಿಕ್ಷಣವನ್ನು ಮಾತ್ರವಲ್ಲದೆ, ತನ್ನ ವಿದ್ಯಾರ್ಥಿಗಳನ್ನು ಜವಬ್ದಾರಿಯುತ ಮತ್ತು ಸಹಾನುಭೂತಿಯ ವ್ಯಕ್ತಿಗಳಾಗಲು ಪ್ರೇರೇಪಿಸುವ ಆದರ್ಶಪ್ರಾಯ ಸಂಸ್ಥೆಯಾಗಿ ನಿಂತಿದೆ. ಅಲ್ಲದೆ, ಮಕ್ಕಳನ್ನು ಅಗತ್ಯವಾದ ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ಸಜ್ಜುಗೊಳಿಸುತ್ತಿದೆ.